¡Sorpréndeme!

ಬೆಂಗಳೂರಿನಲ್ಲಿ ಮಹದಾಯಿ ಪ್ರತಿಭಟನೆ : ಯಡಿಯೂರಪ್ಪ ವಿರುದ್ಧ ರೈತರು ಆಕ್ರೋಶ | Oneindia Kannada

2017-12-26 1,088 Dailymotion

ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ ನಡೆಯುತ್ತಿದ್ದ ಮಹದಾಯಿ ಹೋರಾಟದ ಸ್ಥಳಕ್ಕೆ ಕೊನೆಗೂ ಬಿ ಎಸ್ ಯಡಿಯೂರಪ್ಪ ಭೇಟಿ ನೀಡಿದ್ದು, ಸಂಧಾನ ಸಭೆ ವಿಫಲವಾಗಿದೆ. ಮಹದಾಯಿ ಹೋರಾಟಗಾರರ ಮನವೊಲಿಸಲು ಯಡಿಯೂರಪ್ಪ ಸರ್ಕಸ್ ನಡೆಸಿದರೂ ಪ್ರಯೋಜನಾವಾಗಿಲ್ಲ.ಈ ಬಗ್ಗೆ ಮಾತನಾಡಿದ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್ ಸೊಬರದಮಠ, "ಬಿ ಎಸ್ ಯಡಿಯೂರಪ್ಪ ವಚನ ಭ್ರಷ್ಟಾರಾಗಿದ್ದಾರೆ. ಮಾತನ್ನು ಉಳಿಸಿಕೊಳ್ಳಲು ಯಡಿಯೂರಪ್ಪಗೆ ಸಾಧ್ಯವಾಗಿಲ್ಲ, ಆತನ ವಂಶ ನಿರ್ವಂಶ ಆಗಲಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.ನಾನು ಗೋವಾ ಸಿಎಂ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಜೊತೆ ಮಾತನಾಡಿ ಮಹದಾಯಿ ಸಮಸ್ಯೆಯನ್ನು ಸಂಪೂರ್ಣವಾಗಿ ಇತ್ಯಾರ್ಥಗೊಳಿಸುವುದಾಗಿ ಹೇಳಿದ್ದ ಯಡಿಯೂರಪ್ಪ ಇದೀಗ ಹೇಳಿಲ್ಲ ಎನ್ನುತ್ತಿದ್ದಾರೆ. ಬಿಎಸ್ ವೈ ವಚನ ಭ್ರಷ್ಟಾರಾಗಿದ್ದಾರೆ ಎಂದು ವೀರೇಶ್ ಸೊಬರದಮಠ ವಾಗ್ದಾಳಿ ನಡೆಸಿದರು.ಯಡಿಯೂರಪ್ಪ ಅವರ ಮಾತಿಗೆ ಬಗ್ಗದ ರೈತರು ಬಿಜೆಪಿ ಕಚೇರಿ ಮುಂದೆಯೇ ಅಹೋರಾತ್ರಿ ಧರಣಿ ಮಾಡುವುದಾಗಿ ವೀರೇಶ್ ಸೊಬರದಮಠ ಹೇಳಿದರು.